Tuesday, June 24, 2008

ಜೀವ ಭೂಮಿಯಲ್ಲಿಯೇ ಹುಟ್ಟಿತೇ?

ಜೀವ ಭೂಮಿಯಲ್ಲಿಯೇ ಹುಟ್ಟಿತೇ? ಅನ್ಯಲೋಕದಿಂದ ಜೀವದ ಬೀಜ ಬಂದು ಭೂಮಿಯಲ್ಲಿ ಬಿತ್ತನೆಯಾಯಿತೇ? ಈ ಪ್ರಶ್ನೆಗಳು ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿವೆ ಎನ್ನುವುದಕ್ಕೆ ಅರ್ತ್‌ ಅಂಡ್‌ ಪ್ಲಾನೆಟರಿ ಸೈನ್ಸ್‌ ಲೆಟರ್‍ಸ್‌ ಪತ್ರಿಕೆಯ ೧೫.೬.೨೦೦೮ ಸಂಚಿಕೆಯಲ್ಲಿ ಪ್ರಕಟವಾದ ಈ ಸಂಶೋಧನಾ ಪ್ರಬಂಧ ಸಾಕ್ಷಿ. ಲಂಡನ್ನಿನ ಇಂಪೀರಿಯಲ್‌ ಕಾಲೇಜಿನ ಝೀಟ ಮಾರ್ಟಿನ್ಸ್‌ ಮತ್ತು ಸಂಗಡಿಗರ ಈ ಶೋಧದ ಪ್ರಕಾರ ಸುಮಾರು ೩೫೦ರಿಂದ ೪೫೦ ಕೋಟಿ ವರ್ಷಗಳ ಹಿಂದೆ ಭೂಮಿಗೆ ಬಂದು ಬಿದ್ದ ಉಲ್ಕಾಶಿಲೆಯಲ್ಲಿ ಜೀವಸ್ವರೂಪಿ ಎನ್ನಲಾದ ಡಿಎನ್‌ಎ ಉತ್ಪಾದನೆಗೆ ಬೇಕಾದ ಕಚ್ಚಾ ರಾಸಾಯನಿಕಗಳು ಇದ್ದ ಕುರುಹುಗಳು ದೊರೆತಿವೆ. ಈ ಕಚ್ಚಾ ರಾಸಾಯನಿಕಗಳು ಭೂಮಿಗೆ ಬಿದ್ದ ಮೇಲೆ ಉಲ್ಕಾಶಿಲೆಯನ್ನು ಸೋಂಕಿದವುಗಳಲ್ಲ ಎಂದು ಮಾರ್ಟಿನ್ಸ್‌ ಅಭಿಪ್ರಾಯ ಪಟ್ಟಿದ್ದಾರೆ. ಆ ಬಗ್ಗೆ ಕನ್ನಡಪ್ರಭದಲ್ಲಿನ ವರದಿ ಇಲ್ಲಿದೆ.

1 comment:

ಮಹೇಶ ಭಟ್ಟ said...

ನಿಮ್ಮ ಲೇಖನಗಳು ಆಸಕ್ತಿಕರವಾಗಿದೆ. ಇನ್ನೂ ಯಾಕೆ ಮುಂದೆ ಬರೆಯುತ್ತಿಲ್ಲ. ಕನ್ನಡದಲ್ಲಿ ವಿಜ್ಞಾನ ವಿಷಯಗಳ ಕೊರತೆ ಇದೆ